ಶುಕ್ರವಾರ, ನವೆಂಬರ್ 28, 2008

ಎಲ್ಲೋ ಹುಡುಕಿದೆ ಇಲ್ಲದ ದೇವರ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಂಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲ್ಲಿ

ನಮ್ಮ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಬರೆದ ಈ ಕವನ ನನ್ನ ಅಚ್ಹುಮೆಚ್ಹಿನ ಗೀತೆ. ಎಷ್ಟು ಸರಳವಾಗಿ, ಎಷ್ಟೊಂದು ಅರ್ಥಗರ್ಭಿತವಾಗಿ ಬರೆದಿದ್ದಾರೆ. ಈ ಗೀತೆಗೆ ಸಿ. ಅಶ್ವಥ್‌ರವರು ಸಂಗೀತ ಸಂಯೋಜನೆ ನೀಡಿ ಭಾವಪೂರ್ಣವಾಗಿ ಹಾಡಿದ್ದಾರೆ.

ಈ ಸರಳವಾದ ಗೀತೆಯನ್ನ ಎಲ್ಲರೂ ಅರ್ಥ ಮಾಡಿಕೊಂಡರೆ ಎಷ್ಟೊಂದು ಸುಂದರವಾಗಿರುತ್ತೆ ಅಲ್ವಾ ನಮ್ಮ ಜೀವನ!!!

ಶುಕ್ರವಾರ, ನವೆಂಬರ್ 7, 2008

ಎದೆ ಝಲ್ಲೆನಿಸಿದ ಆ ಕ್ಷಣ

ಇದು ನಡೆದಿದ್ದು ಶಿವಮೊಗ್ಗದಲ್ಲಿ.ನಾನು PUC ಓದುತ್ತಿದ್ದೆ ಆಗ. ನಮ್ಮ ದೊಡ್ಡಮ್ಮರ ಜೊತೆಯಲ್ಲಿ ಇದ್ದೆ ನಾನು.

ನಾವು ಇದ್ದಿದ್ದು ಬಾಡಿಗೆ ಮನೆಯಲ್ಲಿ. ಮನೆಯ ಮಾಲೀಕರು ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಅವರ ಮನೆಯ ಕೀಲಿ ನಮ್ಮ ಹತ್ತಿರ ಕೊಟ್ಟಿದ್ದರು. ನಾನು ದಿವಸ ರಾತ್ರಿ ಮಲಗೋ ಮುಂಚೆ ಅವರ ಮನೆಯ ಒಂದು ದೀಪ ಹಾಕಿ ಬರುತ್ತಿದ್ದೆ. ಬೆಳಿಗ್ಗೆ ಎದ್ದು ಅದನ್ನು ಆರಿಸಿ ಬರುತ್ತಿದ್ದೆ. ಪ್ರತಿ ಮುಂಜಾನೆ ದೀಪ ಆರಿಸಿ ಬರೋ ಮುಂಚೆ ಒಳಗೆಲ್ಲ ಒಂದು ಸಾರಿ ಹೋಗಿ ನೋಡಿಕೊಂಡು ಬರುತ್ತಿದ್ದೆ. ಇದು ಪ್ರತಿನಿತ್ಯ ನಡೀತಿತ್ತು.

ಒಂದು ದಿನ ಮುಂಜಾನೆ ಬೆಳಿಗ್ಗೆ ಎಚ್ಚರ ಆಗೊದು ತಡ ಆಯಿತು. ಅವಸರದಲ್ಲಿ ಹಾಸಿಗೆಯಿಂದ ಎದ್ದೋನೆ ಮುಖ ಕೂಡ ತೊಳೆಯದೆ ಅವರ ಮನೆಯ ಕೀಲಿ ತಗೊಂಡು ಹೋದೆ. ಇನ್ನು ನಿದ್ದೆ ಮಂಪರು ಹಾಗೆ ಇತ್ತು. ಹೋಗಿ ಮನೆಯ ಕೀಲಿ ತೆಗೆದೆ. ಪ್ರತಿದಿವಸದಂತೆ ಒಳಗೆಲ್ಲ ಹೋದೆ. ಸಾಮಾನ್ಯವಾಗಿ ನಾನು ರೂಮ್ ಒಳಗೆ ಹೋಗ್ತಿರಲಿಲ್ಲ. ಆ ದಿನ ಅಡುಗೆ ಮನೆ ಪಕ್ಕದಲ್ಲಿರುವ ರೂಮ್ ಒಳಗೆ ಹೋದೆ. ಸ್ವಲ್ಪ ಕತ್ತಲು ಇತ್ತು ಅಲ್ಲಿ. ಒಳಗೆ ಕಾಲಿಟ್ಟು ತಕ್ಷಣ ನನ್ನ ಬಲಕ್ಕೆ ತಿರುಗಿದೆ. ತಕ್ಷಣ ಎದೆ ದಸಕ್ಕಂತು. ನೋಡ್ತೀನಿ ನನ್ನಷ್ಟೆ ಎತ್ತರ ಇರೊ ಒಬ್ಬ ಮನುಷ್ಯ ನಿಂತುಕೊಂಡಿದ್ದಾನೆ. ನೂರಾರು ಯೋಚನೆಗಳು ಸುಳಿದಾಡಿದವು. ಇವ ಒಳಗೆ ಹೆಂಗೆ ಬಂದ. ನಾನೆ ರಾತ್ರಿ ಎಲ್ಲ ನೋಡಿಕೊಂಡು ಕೀಲಿ ಹಾಕ್ಕೊಂಡು ಬಂದಿದ್ದೆ ಅಂತ. ಹೊರಗೆ ಓಡಿ ಹೋಗಿ ಬಿಡೋಣ ಅನ್ಣಿಸಿತು. ಆದರೂ ಓಡಲಿಲ್ಲ. ಧೈರ್ಯ ತಗೊಂಡು ಅಲ್ಲೇ ನಿಂತೆ.

"ಏ ಹೆಂಗಲೇ ಬಂದೆ ಒಳಗೆ", ಎಂದು ಜೋರಾಗಿ ಅವನಿಗೆ ಕೇಳಿದೆ.

ಅವ ಮಾತಾಡಲಿಲ್ಲ.

ಹೊರಗೆ ಹೋಗಿ ಯಾರನ್ನಾದರು ಕರೆಯೋಣ ಅಂದರೆ ಮನಸ್ಸು ಒಪ್ಪಲಿಲ್ಲ. ಅವ ತಪ್ಪಿಸಿಕೊಂಡು ಹೋಗಿಬಿಟ್ಟರೇ?

ಮತ್ತೆ ಜೋರು ದನಿಯಲ್ಲೇ ಕೇಳಿದೆ "ಮಾತಾಡಲೇ".

ಮತ್ತೆ ಮೌನ.

ಯಾರನ್ನಾದರು ಕರೆಯೋಣ ಅಂತ ಹೊರಗೆ ಹೋಗೊಕ್ಕೆ ಬಲಕ್ಕೆ ತಿರುಗಿದೆ. ಅವ ಕೂಡ ತಿರುಗಿದ. ಮತ್ತೆ ದಿಟ್ಟಿಸಿ ನೋಡಿದೆ ಅವನೂ ಕೂಡ ನನ್ನ ತರಹದ ಅಂಗಿ ಹಾಕ್ಕೊಂಡಿದಾನೆ.

ಕಣ್ಣು ಒರೆಸಿಕೊಂಡು ನೋಡ್ತೀನಿ,ನಂಬಕ್ಕೆ ಆಗ್ದೆ ಇರೊ ಒಂದೆರಡು ಕ್ಷಣಗಳು. ಎದುರಿಗೆ ಇರೋ ವ್ಯಕ್ತೀ ನಾನೇ. Oh my God!. ನನ್ನನ್ನು ನಾನೇ ಗುರುತು ಹಿಡಿಯಕ್ಕಾಗಲಿಲ್ಲ. ಯಾಕೆಂದರೆ ಅಲ್ಲಿ ಒಂದು ಕನ್ನಡಿ ಇತ್ತು. ಆ ಕನ್ನಡಿಯಲ್ಲಿ ಇರೋವ ನಾನೇ. ಆ ಕನ್ನಡಿ ಎತ್ತರವಾಗೇ ಇತ್ತು. ಯಾರಾದರು ತಕ್ಷಣಕ್ಕೆ ಒಳಗೆ ಬಂದು ನೋಡಿದರೆ, ಅದು ಬಾಗಿಲು ತರಹ ಕಾಣುತ್ತಿತ್ತು. ನಾನು ಇನ್ನು ನಿದ್ದೆ ಮಂಪರಿನಲ್ಲೇ ಒಳಗೆ ಬಂದಿದ್ದೆ, ಕತ್ತಲು ಬೇರೆ ಇತ್ತು. ನನಗೆ ಯಾರೋ ಬಾಗಿಲಲ್ಲಿ ನಿಂತುಕೊಂಡಿದ್ದಾರೆ ಅನ್ನಿಸಿತು. ಸುಮಾರು ಒಂದು ಅರ್ಧ ನಿಮಿಷದಲ್ಲಿ ಇದು ನಡೆದು ಹೋಗಿತ್ತು.

ನಮ್ಮ ಕಣ್ಣುಗಳನ್ನು ನಾವೇ ನಂಬಕ್ಕಾಗಲಿಲ್ಲ ಅಂತ ಹೇಳ್ತಾರಲ್ಲ, ಇದಕ್ಕೆ ಇರಬೇಕು.

ಮಂಗಳವಾರ, ನವೆಂಬರ್ 4, 2008

The Power of Dreams

Do the dreams have any meaning to our lives. Of course they do have.

Recently I watched a small video about "The Art of Remembering and Interpreting Dreams". The presenter was Dr. Judith Orloff. You can find more info about her on http://www.drjudithorloff.com/. In that video she was explaining about the dreams and their interpretation. I was excited and doubted. I wanted to give it a try on my own life. During that time, one problem was annoying us in our project. We were fed up in solving that problem. That day before going to bed, I put it across my problem to subconscious mind. Surprisingly, I got an answer in the form of dream. In dream it was clear that the problem lies somewhere else. Still I didn't believe that. But when we solved the problem, I was amazed. It was true. The problem was somewhere else.

You can watch this video. More videos from the doctor are available at http://www.youtube.com/user/judithorloffmd.


I tried like this. Before going to bed, relaxed myself. I was saying myself that I will get the solution to my problem in the form of dream. I can write it vividly, when I wake up in the morning. Repeated the previous steps. I was amazed at the way the dreams work.

ಸೋಮವಾರ, ನವೆಂಬರ್ 3, 2008

ದಕ್ಷಿಣ ಕೊರಿಯಾದ ಸುವಾನ್ ನಗರದಲ್ಲಿ ೫೩ನೇ ಕರ್ನಾಟಕ ರಾಜ್ಯೋತ್ಸವ

ಈ ಬಾರಿ "ಕರ್ನಾಟಕ ರಾಜ್ಯೋತ್ಸವ"ವನ್ನು ದಕ್ಷಿಣ ಕೊರಿಯಾದ ಸುವಾನ್ ನಗರದಲ್ಲಿ ಆಚರಣೆ ಮಾಡಿದೆವು. ನನಗೆ ನೆನಪು ಇರುವ ಹಾಗೆ ನಾನು ಆಚರಿಸಿದ ಮೊದಲನೆಯ "ಕನ್ನಡ ರಾಜ್ಯೋತ್ಸವ". ಶಾಲೆಯಲ್ಲಾಗಲೀ/ಕಾಲೇಜ್ ನಲ್ಲಾಗಲೀ ರಾಜ್ಯೋತ್ಸವ ಆಚರಿಸಿದ ನೆನಪಿಲ್ಲ. ಈ ಬಾರಿಯ ಕನ್ನಡ ರಾಜ್ಯೋತ್ಸವ ವಿಶೇಷವಾದದ್ದು. ಯಾಕೆಂದರೆ ನಮ್ಮ ಮಾತೃಭಾಷೆ ಕನ್ನಡಕ್ಕೆ "ಶಾಸ್ತ್ರೀಯ ಸ್ಥಾನಮಾನ" ಸಿಕ್ಕಿದಂತಹ ಸುಸಂದರ್ಭ.

ಸುವಾನ್ ನಗರದಲ್ಲಿ ಎಲ್ಲಾ ಕನ್ನಡಿಗರು ಹಾಗೂ ಇತರ ಸ್ನೇಹಿತರು ಕೂಡಿಕೊಂಡು ೫೩ನೆಯ ಕನ್ನಡ ರಾಜ್ಯೋತ್ಸವವನ್ನು ತುಂಬಾ ಸಡಗರ, ಸಂಭ್ರಮ ಹಾಗು ಸರಳವಾಗಿ ಆಚರಿಸಿದೆವು. ನನ್ನ ಗೆಳೆಯ ವಿಜಯ್ ತಮ್ಮ ಬ್ಲಾಗ್ ನಲ್ಲಿ ಈ ಆಚರಣೆಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. ಅವರ ಬ್ಲಾಗ್ ತಲುಪಲು ಈ ಲಿಂಕನ್ನು ಕ್ಲಿಕ್ಕಿಸಿ http://sheelavantar.blogspot.com/. ರಾಜ್ಯೋತ್ಸವದ ದೃಶ್ಯಾವಳಿಯನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು.


ನಾವೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಆಚರಿಸಿದ್ದು ನನಗೆ ತುಂಬಾ ಖುಷಿಯಾಯ್ತು. ನಾವಷ್ಟೇ ಅಲ್ಲ ಎಲ್ಲಾ ಕನ್ನಡಿಗರೂ ಸಹ ಒಗ್ಗಟ್ಟಾಗಿರಬೇಕು ಅನ್ನೋದು ನನ್ನ ಹೆಬ್ಬಯಕೆ. ಯಾಕೆಂದರೆ ಕನ್ನಡಿಗರು ಯಾವುದೋ ಸಂಭ್ರಮದಲ್ಲಿ/ಸಂಕಷ್ಟದಲ್ಲಿರುವಾಗ ಒಗ್ಗಟ್ಟಾಗೋದು ದೊಡ್ಡದಲ್ಲ, ಎಲ್ಲಾ ಸಮಯದಲ್ಲಿ ಒಗ್ಗಟ್ಟಾಗಿರಬೇಕು. ಒಂದು ಉದಾಹರಣೆ ಹೇಳ್ತೀನಿ. IT Companyಗಳನ್ನು ತಗೊಂಡರೆ ಪರ ರಾಜ್ಯದವರು ಅವರ ಕಡೆಯವರಿಗೆ ಬಹಳ Support ಮಾಡ್ತಾರೆ. ಅವರಿಗೆ ಕೆಲಸ ಮಾಡೊಕ್ಕೆ ಬರುತ್ತಾ ಬಿಡುತ್ತಾ ಗೊತ್ತಿಲ್ಲ, ಅವರನ್ನು ಕೆಲಸಕ್ಕೆ ತಗೊಳ್ತಾರೆ. ಇದು IT Companyಗಳಿಗೆ ಮಾತ್ರ ಮೀಸಲಾಗಿಲ್ಲ, ಎಲ್ಲಾ ಕಡೆ ಇರೋದೆ.

ಇನ್ನು ಮೇಲಾದರು ನಾವೆಲ್ಲ ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ಒಗ್ಗಟ್ಟಾಗಿರೊಣ.

ಜೈ ಕನ್ನಡಾಂಬೆ, ಜೈ ಭುವನೇಶ್ವರಿ.