ಸುವಾನ್ ನಗರದಲ್ಲಿ ಎಲ್ಲಾ ಕನ್ನಡಿಗರು ಹಾಗೂ ಇತರ ಸ್ನೇಹಿತರು ಕೂಡಿಕೊಂಡು ೫೩ನೆಯ ಕನ್ನಡ ರಾಜ್ಯೋತ್ಸವವನ್ನು ತುಂಬಾ ಸಡಗರ, ಸಂಭ್ರಮ ಹಾಗು ಸರಳವಾಗಿ ಆಚರಿಸಿದೆವು. ನನ್ನ ಗೆಳೆಯ ವಿಜಯ್ ತಮ್ಮ ಬ್ಲಾಗ್ ನಲ್ಲಿ ಈ ಆಚರಣೆಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. ಅವರ ಬ್ಲಾಗ್ ತಲುಪಲು ಈ ಲಿಂಕನ್ನು ಕ್ಲಿಕ್ಕಿಸಿ http://sheelavantar.blogspot.com/. ರಾಜ್ಯೋತ್ಸವದ ದೃಶ್ಯಾವಳಿಯನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು.
ನಾವೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಆಚರಿಸಿದ್ದು ನನಗೆ ತುಂಬಾ ಖುಷಿಯಾಯ್ತು. ನಾವಷ್ಟೇ ಅಲ್ಲ ಎಲ್ಲಾ ಕನ್ನಡಿಗರೂ ಸಹ ಒಗ್ಗಟ್ಟಾಗಿರಬೇಕು ಅನ್ನೋದು ನನ್ನ ಹೆಬ್ಬಯಕೆ. ಯಾಕೆಂದರೆ ಕನ್ನಡಿಗರು ಯಾವುದೋ ಸಂಭ್ರಮದಲ್ಲಿ/ಸಂಕಷ್ಟದಲ್ಲಿರುವಾಗ ಒಗ್ಗಟ್ಟಾಗೋದು ದೊಡ್ಡದಲ್ಲ, ಎಲ್ಲಾ ಸಮಯದಲ್ಲಿ ಒಗ್ಗಟ್ಟಾಗಿರಬೇಕು. ಒಂದು ಉದಾಹರಣೆ ಹೇಳ್ತೀನಿ. IT Companyಗಳನ್ನು ತಗೊಂಡರೆ ಪರ ರಾಜ್ಯದವರು ಅವರ ಕಡೆಯವರಿಗೆ ಬಹಳ Support ಮಾಡ್ತಾರೆ. ಅವರಿಗೆ ಕೆಲಸ ಮಾಡೊಕ್ಕೆ ಬರುತ್ತಾ ಬಿಡುತ್ತಾ ಗೊತ್ತಿಲ್ಲ, ಅವರನ್ನು ಕೆಲಸಕ್ಕೆ ತಗೊಳ್ತಾರೆ. ಇದು IT Companyಗಳಿಗೆ ಮಾತ್ರ ಮೀಸಲಾಗಿಲ್ಲ, ಎಲ್ಲಾ ಕಡೆ ಇರೋದೆ.
ಇನ್ನು ಮೇಲಾದರು ನಾವೆಲ್ಲ ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ಒಗ್ಗಟ್ಟಾಗಿರೊಣ.
ಜೈ ಕನ್ನಡಾಂಬೆ, ಜೈ ಭುವನೇಶ್ವರಿ.
2 ಕಾಮೆಂಟ್‌ಗಳು:
ಚಿಕ್ಕ,ಚೊಕ್ಕ ಮತ್ತು ಅಭಿಪ್ರಾಯಗಳನ್ನು ನೇರವಾಗಿ ಬಿಂಬಿಸುವಂಥ ಲೇಖನಗಳು...ತುಂಬಾ ಚೆನ್ನಾಗಿವೆ. ಹೀಗೇ ನಿಮ್ಮ ಕೀ ಬೋರ್ಡನಿಂದ ಹರಿದು ಬರುತ್ತಿರಲಿ.... :)
ಧನ್ಯವಾದಗಳು ವಿಜಯ್.
ಕಾಮೆಂಟ್ ಪೋಸ್ಟ್ ಮಾಡಿ