ಸೋಮವಾರ, ಅಕ್ಟೋಬರ್ 13, 2008

ಪ್ರತ್ಯಕ್ಷವಿದ್ದರೂ ಪ್ರಮಾಣ ಮಾಡಿ ನೋಡು

ನಾವು ಪ್ರತಿದಿನ ಪತ್ರಿಕೆಗಳನ್ನು ಓದುತ್ತೀವಿ, T.V. ನೋಡುತ್ತೀವಿ, ಪುಸ್ತಕ ಓದುತ್ತೀವಿ. ನಾವು ತಕ್ಷಣ ಓದಿದ್ದನ್ನು, ನೋಡಿದ್ದನ್ನು ನಿಜ ಅಂದುಕೊಳ್ತೀವಿ. ಆದರೆ ಬೆಳ್ಳಗಿರೊದೆಲ್ಲಾ ಹಾಲಲ್ಲ. ನಮ್ಮ ಮನಸ್ಸೇ ಹಾಗೇ, ಅದನ್ನೆಲ್ಲಾ ನಂಬುತ್ತೀವಿ. ಯಾಕೆಂದರೆ ಮಾದ್ಯಮ ಅಷ್ಟೊಂದು ಪ್ರಭಾವಶಾಲಿಯಾಗಿದೆ. ನಮ್ಮನ್ನೆಲ್ಲಾ ತನ್ನ ಕಡೆ ಸೆಳೆದುಕೊಂಡಿದೆ. ಆದರೆ ನಾವು ಓದಿದ, ನೋಡಿದ ಎಲ್ಲಾ ವಿಷಯ ನಿಜ ಆಗಿರೊದಿಲ್ಲ.

ಆದರೆ "ಪ್ರತ್ಯಕ್ಷವಿದ್ದರೂ ಪ್ರಮಾಣ ಮಾಡಿ ನೋಡು" ಅಂಥ ಗಾದೆ ಇದೆ. ಏನೇ ಆಗಲಿ ನಂಬೊದಕ್ಕಿಂತ ಒಂದು ಸಾರಿ ವಿಚಾರ ಮಾಡಬೇಕು ಅನ್ನೋದೆ ಇದರ ಅರ್ಥ.

ಇತ್ತೀಚೆಗೆ ಒಂದು ಕನ್ನಡ ಚಾನೆಲ್ ನಲ್ಲಿ ಯಾವುದೋ ವಿಷಯದ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಮೂರು-ನಾಲ್ಕು ದಿವಸ ಪ್ರಸಾರನೂ ಮಾಡಿದರು. ಆದರೆ ಐದನೆಯ ದಿವಸ ಗೊತ್ತಾತು, ಅದು ಸುಳ್ಳು ಅಂಥ. ಪತ್ರಿಕಾ ಸ್ವಾತಂತ್ರ್ಯ ಐತೆ ನಿಜ, ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.

1 ಕಾಮೆಂಟ್‌:

Ashok Patil C ಹೇಳಿದರು...

ಹೌದು ಮಿತ್ರೆಶ್ ಪ್ರಸಾರ ಮಧ್ಯಮ ನಮ್ಮ ವಿಚಾರಗಳನ್ನು ಬದಲಾಯಿಸಿ ಬಿಡುತ್ತೆ .....ನಾವು ಮಾಡೊ ಕೆಲಸ ಮಾತಾಡೋ ಮಾತು ನೋಡೋ ನೋಟ ಎಲ್ಲವನ್ನು ಬದಲಾಯಿಸುತ್ತೆ ಅನ್ನೋದು ನನ್ನ ಭಾವನೆ. ನಾವು ನಂಬಿರುವ ಬಹಳ ವಿಷಯಗಳು ಪುಸ್ತಕಗಳಿಂದ ಕಲಿತಿರೋದೆ ವಿನಃ ನಮ್ಮ ಸ್ವಂತ ಬುದ್ದಿವಂತಿಕೆಯಿಂದ ಅಲ್ಲ.