ಸೋಮವಾರ, ಅಕ್ಟೋಬರ್ 13, 2008

ಪ್ರತ್ಯಕ್ಷವಿದ್ದರೂ ಪ್ರಮಾಣ ಮಾಡಿ ನೋಡು

ನಾವು ಪ್ರತಿದಿನ ಪತ್ರಿಕೆಗಳನ್ನು ಓದುತ್ತೀವಿ, T.V. ನೋಡುತ್ತೀವಿ, ಪುಸ್ತಕ ಓದುತ್ತೀವಿ. ನಾವು ತಕ್ಷಣ ಓದಿದ್ದನ್ನು, ನೋಡಿದ್ದನ್ನು ನಿಜ ಅಂದುಕೊಳ್ತೀವಿ. ಆದರೆ ಬೆಳ್ಳಗಿರೊದೆಲ್ಲಾ ಹಾಲಲ್ಲ. ನಮ್ಮ ಮನಸ್ಸೇ ಹಾಗೇ, ಅದನ್ನೆಲ್ಲಾ ನಂಬುತ್ತೀವಿ. ಯಾಕೆಂದರೆ ಮಾದ್ಯಮ ಅಷ್ಟೊಂದು ಪ್ರಭಾವಶಾಲಿಯಾಗಿದೆ. ನಮ್ಮನ್ನೆಲ್ಲಾ ತನ್ನ ಕಡೆ ಸೆಳೆದುಕೊಂಡಿದೆ. ಆದರೆ ನಾವು ಓದಿದ, ನೋಡಿದ ಎಲ್ಲಾ ವಿಷಯ ನಿಜ ಆಗಿರೊದಿಲ್ಲ.

ಆದರೆ "ಪ್ರತ್ಯಕ್ಷವಿದ್ದರೂ ಪ್ರಮಾಣ ಮಾಡಿ ನೋಡು" ಅಂಥ ಗಾದೆ ಇದೆ. ಏನೇ ಆಗಲಿ ನಂಬೊದಕ್ಕಿಂತ ಒಂದು ಸಾರಿ ವಿಚಾರ ಮಾಡಬೇಕು ಅನ್ನೋದೆ ಇದರ ಅರ್ಥ.

ಇತ್ತೀಚೆಗೆ ಒಂದು ಕನ್ನಡ ಚಾನೆಲ್ ನಲ್ಲಿ ಯಾವುದೋ ವಿಷಯದ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಮೂರು-ನಾಲ್ಕು ದಿವಸ ಪ್ರಸಾರನೂ ಮಾಡಿದರು. ಆದರೆ ಐದನೆಯ ದಿವಸ ಗೊತ್ತಾತು, ಅದು ಸುಳ್ಳು ಅಂಥ. ಪತ್ರಿಕಾ ಸ್ವಾತಂತ್ರ್ಯ ಐತೆ ನಿಜ, ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.

ಮಂಗಳವಾರ, ಅಕ್ಟೋಬರ್ 7, 2008

ಎಲ್ಲಾ ಹಣಕ್ಕಾಗಿ

ನಮ್ಮ ರಾಜ್ಯದ ರಾಜಕೀಯ ನೋಡಿದರೆ, ಎಲ್ಲಾ ಹಣಕ್ಕಾಗಿ ಇದ್ದಾರೇನೊ ಅನ್ನಿಸ್ತದೆ. ಅನ್ನಿಸ್ತದೆ ಏನು, ಅದೇ Fact. ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ ಅಂಥ ಕೇಳಿಲ್ವ? ರಾಜಕೀಯಕ್ಕೆ ಎನು ಮೀಸಲಾಗಿಲ್ಲ ಇದು, ಎಲ್ಲಾ ಕ್ಷೇತ್ರದಲ್ಲೂ ಇದೇ ಕಥೆ. ಆದರೆ ರಾಜಕೀಯದ ಮಂದಿಗಳು ಇದರಲ್ಲಿ ಒಂದು ಕೈ ಮುಂದೆ.

ಪ್ರಜಾರಾಜ್ಯ ಅಂತಾರೆ, ಪ್ರಜೆಗಳಿಗೆ ಅವರ ನಾಯಕನನ್ನು ಆರಿಸೊಕ್ಕೆ ಮಾತ್ರ ಹಕ್ಕು ಇದೆ. ಆದರೆ ಅವನನ್ನು ನಾಯಕ ಸ್ಥಾನದಿಂದ ಕೆಳಗೆ ಇಳಿಸೊ ಹಕ್ಕಿಲ್ಲ. Why? ನನಗಂತೂ ಗೊತ್ತಿಲ್ಲ. ಇಲ್ಲಿ ನಾಯಕರಾಗಿ ಬರೊ ಮಂದಿಯಲ್ಲಿ, ಸುಮಾರು ಜನ ಜೇಬು ತುಂಬಿಸಿಕೊಂಡೇ ಹೋಗ್ತಾರೆ? ಯಾಕೆಂದರೆ, ನಾಯಕರಾಗೊದಕ್ಕೆ ಜೇಬು ಖಾಲಿಯಾಗಿರುತ್ತೆ ನೋಡಿ ಅದಕ್ಕೆ. ಮತದಾರರನ್ನು ಕೊಂಡುಕೊಳ್ಳುತ್ತಾರೆ. ಒಬ್ಬ ಸಾಮಾನ್ಯ ಮತದಾರ ಕೂಡ ಅವನನ್ನೇ ಮಾರಿಕೊಂಡು ಬಿಡ್ತಾನೆ. ಎಲ್ಲಾ ಹಣಕ್ಕೋಸ್ಕರ.

ಹಣ ಗಳಿಸಿರಿ, ಆದರೆ ಒಳ್ಳೆ ಮಾರ್ಗದಿಂದ ಗಳಿಸಿ. ಬಸವಣ್ಣನವರು ಹೇಳ್ತಾರೆ "ಕಾಯಕವೇ ಕೈಲಾಸ" ಎಂದು. ಕಾಯಕವನ್ನು ಒಳ್ಳೆ ದೃಷ್ಟಿಯಿಂದ ನೋಡಿ. ಯಾಕಂದರೆ ಎಲ್ಲಾರು ಮಾಡೊದು ಕಾಯಕವೇ.

ಶನಿವಾರ, ಅಕ್ಟೋಬರ್ 4, 2008

ನಮ್ಮ ಶಿಕ್ಷಣ ಶಿಕ್ಷೆಯಾ?

ನಮ್ಮ ಮೂಲಭೂತ ಶಿಕ್ಷಣ ಸರಿಯಾಗಿದೆಯಾ ಎಂದು ಒಂದು ಪ್ರಶ್ನೆ ಕೇಳಿಕೊಳ್ಳಿ. The answer is NO.

ನಮ್ಮ ಶಿಕ್ಷಣ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ ಎದುರಿಸುವುದು ಹೇಗೆ? ಏನಾದರೂ ಸಮಸ್ಯೆಗೆ ಬಂದಾಗ ಆತ್ಮವಿಶ್ವಾಸದಿಂದ ಎದುರಿಸುವುದು ಹೇಗೆ? ನಾಯಕತ್ವದ ಗುಣಗಳನ್ನು ಕಲಿಸಿಕೊಡುತ್ತಾ?. ಇಲ್ಲ.

ಈಗ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನೇ ತಗೊಳ್ಳಿ, ಯಾವುದಾದರೂ ನಗರಕ್ಕೆ ಬಂದಾಗ ಅಲ್ಲಿಯ ಪರಿಸ್ಥಿತಿಯನ್ನು Immediate ಆಗಿ ಎದುರಿಸಕ್ಕೆ ಆಗಲ್ಲ. ಹೊಸ ಜನಗಳ ಹತ್ತಿರ ವ್ಯವಹಾರ ಮಾಡೊದು ಬಹಳ ಕಷ್ಟ ಆಗುತ್ತೆ. ಇಪ್ಪತ್ತು ಜನದ ಮುಂದೆ ಏನಾದರು ಮಾತನಾಡಬೇಕು ಅಂದ್ರೆ ಆಗಲ್ಲ. ಯಾಕೆಂದರೆ ಅವರಿಗೆ ನಾಯಕತ್ವದ ಗುಣಗಳು ಆಗಲಿ, ಅಷ್ಟೊಂದು ಆತ್ಮವಿಶ್ವಾಸ ಆಗಲಿ ಇರೊದಿಲ್ಲ. ಕೆಲವರು ಮಾತ್ರ ಇಂತಹ ಪ್ರಸಂಗಳನ್ನು ಎದುರಿಸಬಲ್ಲರು. ಆದರೆ ಅವರು ಅದನ್ನು ನಮ್ಮ ಶಿಕ್ಷಣದ ಮೂಲಕ ಕಲಿತಿರೊದಿಲ್ಲ.

ಇದಕ್ಕೆ ಏನ್ ಮಾಡಬೇಕು? ನಮ್ಮ ಮೂಲಭೂತ ಶಿಕ್ಷಣವನ್ನೇ ಬದಲಾಯಿಸಬೇಕು. ನವ ಭಾರತವನ್ನು ಕಟ್ಟುವಂಥ ಪಡೆಯನ್ನು ರೂಪಿಸುವಂಥಹ ಶಿಕ್ಷಣವನ್ನು ನೀಡಬೇಕು. ಈಗಿರುವ ಶಿಕ್ಷಣದ ಜೊತೆಗೆ, ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನವನ್ನು ಎದುರಿಸೊದಕ್ಕೆ ಆತ್ಮವಿಶ್ವಾಸ, ಧೈರ್ಯ, ಸ್ಥೈರ್ಯಗಳನ್ನು ಕಲಿಸಿಕೊಟ್ಟರೆ, ಅವರು ಮುಂದೆ ಎಂಥ ಸವಾಲನ್ನಾದರನ್ನು ಎದುರಿಸುತ್ತಾರೆ.

ಶುಕ್ರವಾರ, ಅಕ್ಟೋಬರ್ 3, 2008

ಬಾಂಬ್ OR ಪಟಾಕಿ?

ಯಾವುದೇ ಪತ್ರಿಕೆ ಅಥವಾ ನ್ಯೂಸ್ ಚಾನೆಲ್ ನೋಡಿದರೆ ಎಲ್ಲಾದರೂ ಒಂದು ಕಡೆ ಬಾಂಬ್ ಸ್ಫೋಟ ಸುದ್ದಿ ಸಿಗುತ್ತೆ. ಬಾಂಬ್ ಸಿಡಿಸೋದು ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಿದಂಗೆ ಹಾಗ್ತಾ ಇದೆ. ಯಾಕೆ? ಬಾಂಬ್ ಸಿಡಿಸಿ ಜನ ಕೊಲ್ಲೋದರಿಂದ ಏನ್ ಸಾಧಿಸ್ತಾರೆ? Nothing.

ಯಾಕೆ ಜನ ಬೇರೆಯವರನ್ನು ತಮ್ಮ ತರಹ ಎಂದು ಯೋಚನೆ ಮಾಡಲ್ಲ. ಬಾಂಬ್ ಹಾಕುವುದರಿಂದ ಏನ್ ಅಗುತ್ತೆ? ಸ್ವಲ್ಪ ಜನ ಸಾಯ್ತರೆ, ಕೆಲವರು ಗಾಯಗೊಳ್ಳುತ್ತಾರೆ. That's all. Nothing more happens.

ಬಾಂಬ್ ಹಾಕಿದರೆ ಯಾವುದೋ ಒಂದು ಧರ್ಮ ನಾಶ ಆಗಲ್ಲ, ಇನ್ನೊಂದು ಧರ್ಮ ಬೆಳೆಯೋದಿಲ್ಲ. ಮಾನವ ಧರ್ಮ ನಾಶ ಅಗುತ್ತೆ, ರಾಕ್ಷಸ ಧರ್ಮ ತಾಂಡವವಾಡುತ್ತೆ. ಮಾನವೀಯತೆ ಉಳಿಯೊಲ್ಲ. ಅಮಾನವೀಯತೆ ಬೆಳೆಯುತ್ತೆ.

ಎಲ್ಲಾ ಧರ್ಮನೂ ಒಳ್ಳೆದೇನೆ ಹೇಳುತ್ತೆ, ಎಲ್ಲಾ ಮಹಾನುಭವರು ಒಳ್ಳೆ ಭೋದನೆನೇ ಮಾಡಿದ್ದಾರೆ. ಆದರೂ ಜನಗಳು ಅರಿತುಕೊಂಡಿಲ್ಲ ಅಂದರೆ ಏನ್ ಮಾಡಕ್ಕೆ ಆಗೊಲ್ಲ.

ಇದೆಲ್ಲ ನೋಡ್ತ ಇದ್ದರೆ ಒಬ್ಬ ಸಾಮಾನ್ಯ ಮನುಷ್ಯ ಎನ್ ಮಾಡ್ತಾನೆ. ಇವೆಲ್ಲ ಸುದ್ದಿ ಕೇಳಿ ಕೇಳಿ ಇದೊಂದು ಜೀವನದ ಭಾಗ ಅನ್ನಿಸಿಬಿಡುತ್ತೆ. ನಾನೇ ನೋಡಿ, Blog ಬರೆದಿದ್ದೀನಿ. ನನ್ನ ಅಭಿಪ್ರಾಯ ಹೇಳ್ತಿದೀನಿ.

ಎಲ್ಲರೂ ತನ್ನಂತೆ ಅಂತ ಭಾವಿಸಿದರೆ, ಈ ಬಾಂಬ್, ಕೊಲೆ, ಯುದ್ಧ, etc... ಏನೂ ಆಗಲ್ಲ. ನಾವೆಲ್ಲಾ ಶಾಂತಿಯುತವಾದ ಪ್ರಪಂಚವನ್ನು ನೋಡಬಹುದು. Come, let's build peaceful WORLD.